ಸ್ವಾಭಿಮಾನದ ನಲ್ಲೆ
ವೀರಕೇಸರಿ ಘಂಟಸಾಲ
ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ ಒಳಗೆ ವೇದನೆ ಇಳಿದು ಬಾ ಬಾಲೆ || ಪ ||
ಮೂಡಿ ಚಂದಿರ ನಿನಗಾಗಿ ಕೂಡಿ ತಂಬೆಲರೆನಗಾಗಿ
ನೋಡು ಪ್ರಿಯತಮೆ ಹಾಲು ಹುಣ್ಣಿಮೆ ತಂದ ನಮಗಾಗಿ || ೧ ||
ನಿನ್ನ ಗರ್ವದ ಹುಸಿ ಮೌನ ಅಣಕಿಸದೆ ನಾ ಬಿಡೆ ನಿನ್ನ
ವರುಷ ಸಿಂಹನ ಬಾಹು ಬಂಧನ ನಿನ್ನ ಕಲ್ಯಾಣ || ೨ ||
ತುಂಬು ಹರೆಯದ ಹೊಸ ಹೆಣ್ಣೆ
ಒಲೆಯ ಮೇಲಿನ ಹಸಿ ಬೆಣ್ಣೆ
ಏಕೆ ಸುಮ್ಮನೆ ಆತ್ಮ ವಂಚನೆ ನಿನ್ನ ಪತಿ ನಾನೆ|| ೩ ||
ವೀರಕೇಸರಿ
ಚಿತ್ರ ನೋಡಿ